Copyright © HESCOM
ALL RIGHTS RESERVED.

Designed By- IT Team HESCOM.

  ಸಹಾಯವಾಣಿ
      ೧೯೧೨

      (1912)

ಇತಿಹಾಸ


ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆಯನ್ನು ತರುವ ಸಲುವಾಗಿ ಪ್ರಸರಣ ಮತ್ತು ವಿತರಣಾ ಚಟುವಟಿಕೆಗಳನ್ನು ಕರ್ನಾಟಕ ಸರ್ಕಾರವು ಬೇರ್ಪಡಿಸಿತು. ಇದರ ಪರಿಣಾಮವಾಗಿ, ಕಂಪನಿಗಳ ಆಕ್ಟ್, 1956 ರ ಅಡಿಯಲ್ಲಿ (1956 ರ 1 ನೇದಲ್ಲಿ) ದಿನಾಂಕ:30.04.2002 ರಂದು ಹುವಿಸಕಂನಿಯು ಸಂಘಟಿತವಾಯಿತು ಮತ್ತು ಕಂಪನಿಯು ದಿನಾಂಕ:01.06.2002 ರಿಂದ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಭೌಗೋಳಿಕವಾಗಿ ಧಾರವಾಡ, ಬೆಳಗಾವಿ, ಗದಗ, ಹಾವೇರಿ,ಉತ್ತರ ಕನ್ನಡ, ಬಾಗಲಕೋಟೆ ಮತ್ತು ವಿಜಯಪುರ 7 ಜಿಲ್ಲೆಗಳನ್ನು ಒಳಗೊಂಡ ಕಂಪನಿಯು ಅಸ್ತಿತ್ವಕ್ಕೆ ಬಂದಿತು. ಈ ಕಂಪನಿಯ ವಿದ್ಯುತ್ ಉತ್ಪಾದನೆಯ ವಿತರಣೆ ಮತ್ತು ಪೂರೈಕೆಯ ವ್ಯವಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಆರ್ಥಿಕವಾಗಿ ಸಾಗಿಸುವ ಉದ್ದೇಶವನ್ನು ಹೊಂದಿದೆ. ಸಂಸ್ಥೆಯು ಹುಬ್ಬಳ್ಳಿ ನಗರದಿಂದ ಕಾರ್ಯನಿರ್ವಹಿಸುತ್ತಿದ್ದು, ಕೃಷಿ ಕ್ಷೇತ್ರದ ಬಳಕೆಗಾಗಿ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ.    ಕಂಪೆನಿಯು ಆರಂಭದ ಪರಿವರ್ತನೆಯ ಸಂದರ್ಭದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿ ದಕ್ಷತೆ ಮತ್ತು ಉತ್ತಮ ಗ್ರಾಹಕ ಸೇವೆಗಳನ್ನು ಸುಧಾರಿಸುವ ಗುರಿಯನ್ನು ಸಾಧಿಸಿತು. ಇಂದು ಕರ್ನಾಟಕ ಸರ್ಕಾರ ಕೈಗೊಂಡ ವಿದ್ಯುತ್ ಕ್ಷೇತ್ರ ಸುಧಾರಣೆಗಳ ಅನುಸಾರವಾಗಿ ಕಂಪನಿಯು ಒಂದು ವಾಣಿಜ್ಯ ಘಟಕವಾಗಿ ಕಾರ್ಯ ನಿರ್ವಹಿಸುತ್ತಿದೆ

ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ, ವಿಶ್ವಾಸಾರ್ಹ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದು ಹೆಸ್ಕಾಂನ ಉದ್ದೇಶವಾಗಿದ್ದು ಈ ಕೆಳಗಿನಂತೆ ಹೆಜ್ಜೆ ಸಾಧಿಸಲು ಹೆಸ್ಕಾಂ ಬದ್ಧವಾಗಿದೆ:

1) ವಿತರಣೆಯಲ್ಲಿ ಅತ್ಯುತ್ತಮ ಪದ್ಧತಿಗಳನ್ನು ಪ್ರೋತ್ಸಾಹಿಸುವುದು.

2) ಎಲ್ಲಾ ತಾಂತ್ರಿಕ ಸೌಲಭ್ಯಗಳ ಉನ್ನತ ಆದೇಶ ನಿರ್ವಹಣೆಗೆ ಅನುವು ಮಾಡುವುದು.

3) ಗ್ರಾಹಕರ ಉತ್ತಮ ಗುಣಮಟ್ಟದ ಸೇವೆಗಳಿಗೆ ಒತ್ತು ನೀಡುವುದು.